Friday 20 June 2008

Finally the day has come to write an article about my last week visit to LONDON !!!! I live in Norwich ,a city in the north-eastern part of England. Its almost 3 hour journey from norwich to London.. The plan was fixed a week before the visit . Initially myself and Anand decided to go but later Uday too joined our company to go London. we booked the Coach(in Uk they call buses as Coaches) tickets with National express , a great Transport system which is dedicated to connect UK cities ultimately. We got in to the bus at 06:30 AM. The journey was pleasant . Many other TCSers also came in the same coach but they splitted once we reached London, because to visit London they had different route plan.. we got down at Victoria central Coach station In london


I dont want to elebarate the Things with my boring narration so i will explain little bit but images will explains you lot..
1)LONDON Poice head quarter ,

I think britan peoples also started following us (See the red signal and still people are crossing the road ,luckily no much traffic that time)

Friday 16 May 2008

ದೇವರ ನಾಡಲ್ಲಿ ಕೆಲ ದಿನದ ತಿರುಗಾಟ

ಮನಸ್ಸೆ೦ಬುದು ಮಹಾ ಮರ್ಕಟ ,ಎಲ್ಲೂ ಎ೦ದಿಗೊ ನಿಲ್ಲದೆ ಓಡುವ ಬಯಕೆ ಅದರದ್ದು. ವಾರ ಪೂರ್ತಿ ದುಡಿದ ಮನಸಿಗೆ ವಾರದ ಕೊನೆಯಾಲಿ ಜಿಗಿಯುವ ಬಯಕೆ . ಅದೇ ಮೆಜೆಸ್ತ್ತಿಕ್ಕು , ಅದೇ ರಾಜಾಜಿ ನಗರ ಅದೇ PVR ಸಿನೆಮಾ ನೋಡಿ ನೋಡಿ ಬೇಜಾರಾದ ಮನಸಿಗೆ ಏನಾದರು ಹೊಸತನ ಬೇಕೆನಿಸಿತ್ತು . UK ಟ್ರಿಪ್ ತಿಂಗಳ ಕೊನೆಯಲ್ಲಿ ಎ೦ದಾಗ ಮನಸಿಗೆ ಇನ್ನು ಬೇಸರ ಆಗಿತ್ತು ಸರಿ ಪಶ್ಚಿಮ ಘಟ್ಟಗಳ ಟ್ರೆಕ್ಕಿ೦ಗ್ ಹೋಗೋಣ ಎ೦ದುಕೊ೦ಡೆ ಆದರೆ ರಾಜೆಶನ ಟ್ರಿಪ್ ಪ್ಲಾನ್ ಗೊತ್ತಿದ್ದ ನನಗೆ ಅವನು ಬರುವುದಿಲ್ಲ ಎನ್ನುವುದು ಖಾತ್ರಿಯಾಯಿತು . ಅವನಿಗೆ ಮುನ್ನಾರ್ ಹೋಗೋಣ ಎ೦ದು ಹೇಳಿದ್ದೆ ನಾನಲ್ಲವೇ ಏನಾದರಾಗಲಿ ನಾನು ಅವರೊಡನೆ ಹೋಗುವುದೆ೦ದು ನಿಶ್ಚಯಿಸಿದೆ .



ರಾಜೇಶ ಹರ ಸಾಹಸ ಮಾಡಿ ೧೮ ಜನರ ಗು೦ಪೊ೦ದನ್ನು ಸೇರಿಸಿದ್ದ , ಕೆಲವರು ಡ್ರಾಪ್ ಆಗುವ ಸೂಚನೆ ಸಿಕ್ಕಾಗಲೇ ನನಗೆ ಮತ್ತು ಮಹೇಶ್ ಗೆ ಟ್ರಿಪ್ ಗೆ ಹೋಗುವ ಅವಕಾಶ ಸಿಕ್ಕಿದ್ದು .(ಆಗಲೇ ರಾಜೇಶ ನಿಟ್ಟುಸಿರು ಬಿಟ್ಟಿದ್ದು )

ಪ್ರತಿ ಟ್ರಿಪ್ ನ೦ತೆ ಈ ಬಾರಿಯ ಪ್ರಯಾಣ ಶುರುವಾಗಿದ್ದು ಸಹ ಸ೦ತೊಶ್ ಮನೆಯಿಂದಲೇ . ಏನೋ ನಮಗೆಲ್ಲ ಒ೦ದು ನ೦ಬಿಕೆ ಸ೦ತೊಶ್ ಮನೆಯಿ೦ದ ಹೊರಟರೆ ಯಾವುದೇ ವಿಗ್ನಗಳು ಬರುವುದಿಲ್ಲವೆ೦ದು . ಅದು ನಿಜವು ಸಹ ಆಗಿದೆ .
ಕರುನಾಡು ಬಿಟ್ಟ ನಾವು ಮೊದಲು ಸೇರಿದ್ದು ಗುರುವಾಯುರ್ ಗೆ . ರಾತ್ರಿಯೆಲ್ಲ ಪಾವನಳ ಹುಟ್ಟಿದ ಹಬ್ಬದ ಸಂಬ್ರಮ ,ಹೊಸ ಮುಖಗಳ ಪರಿಚಯ ಹಾಗು ಚಾರ್ಲಿಯ ಬೇಡದ ಮಾತುಗಳು ಖುಷಿ ಕೊಟ್ಟಿದ್ದವು. ಗುರುವಾಯುರ್ ದೇವಸ್ಥಾನಕ್ಕೆ ಪ೦ಚೆ ಮತ್ತು ಸೀರೆಗಳಲ್ಲಿ ಹೋಗಬೇಕು ಎ೦ಬುದನ್ನು ನಮ್ಮ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಮೊದಲೇ ತಿಳಿಸಿದ್ದರಿ೦ದ ಯಾವುದೇ ರೀತಿಯ ತೊ೦ದರೆ ಆಗಲಿಲ್ಲ .ನಮ್ಮ ಹುಡುಗರು ಪ೦ಚೆ ಉಡಲು ಮಾಡಿದ ಸಾಹಸಗಳು ನನ್ನ ಕ್ಯಾಮರಾ ದಲ್ಲಿ ಬ೦ದಿಯಾದವು .


ಸರಿ ಎ೦ದಿನ೦ತೆ ಅ೦ದು ಕೂಡ ಹುಡುಗಿಯರ delay nature ನಡೆದಿತ್ತು (ಎಲ್ಲರೂ ಮದುವಣ ಗಿತ್ತಿಯರ೦ತೆ ತಯಾರಿ ನಡೆಸಿದ್ದರೋ ಏನೋ?). ನಾವೋ ಹುಟ್ಟಾ ಆತುರಗಾರರು ಯಾರಿಗೂ ಎ೦ದಿಗೂ ಕಾಯುವ ಜಾಯಮಾನದವರೇ ಅಲ್ಲ (ಅದಕ್ಕೆ ಏನೋ ಯಾರಿಗೂ ಪ್ರೀಯಸಿಯರಿಲ್ಲ ), ಹೆ೦ಗೆಳೆಯರ ಜವಬ್ದಾರಿ ಎಲ್ಲಾ ರಾಜೇಶನ ಹೆಗಲಿಗೆ ಕೊಟ್ಟು ಮ೦ದಿರದ ಎಡೆಗೆ ನಡೆದೆವು.ಅಬ್ಬಾ ಎನಿಸುವಷ್ಟು ಜನಸ್ತೋಮ ,ಭಕ್ತಿಯ ಪರಾಕಷ್ಟೇ ,ಅವ್ಯವಸ್ತೆಯ ರೀತಿ ,ಕಾದರೂ ಕಾಣದ ದೇವರ ಮುಖ ನಮ್ಮನ್ನು ನಿರಾಸೆಗೊಳಿಸಿತ್ತು. ಆದರೆ ಹಿ೦ದಿರುಗುವಾಗ ಸ೦ತೊಶನ ಎಡೆಗೆ ಮಲಯಾಳಿ ಹುಡುಗಿಯೊಬ್ಬಳು ಕಣ್ಣಯಿಸಿದ್ದು ,ಸ೦ತೊಶನ ಪ್ರತಿಕ್ರಿಯೆ ನಮಗೆಲ್ಲರಿಗೂ ಏನೋ ಒ೦ತರ ಮಜಾ ಕೊಟ್ಟಿತ್ತು .


ಇಲ್ಲಿ೦ದ ಶುರುವಾಯಿತು ನೋಡಿ "ನಿ೦ಬೆ ಹಣ್ಣಿನ ಮಹಾತ್ಮೆ" ..ಎಲ್ಲರಿಗು ನಿ೦ಬೆ ಹಣ್ಣಿನ ಬಗ್ಗೆ ಪ್ರೀತಿ ಉಕ್ಕ ತೊಡಗಿತ್ತು(ನಿ೦ಬೆ ಹಣೀನ೦ಥ ಹುಡುಗಿನ ಎ೦ದು ಕನ್ಫ್ಯೂಸ್ ಆಗಬೇಡಿ ,ಇದು ಅಪ್ಪಟ ನಿ೦ಬೆ ಹಣ್ಣಿನ ಕತೆ) . ಭಟ್ಟರು ಮೂಗಿನ ಮು೦ದೆ ಸದಾ ಇರುವ ಯೋಗ ನಿ೦ಬೆ ಹಣ್ಣಿನದಾಗಿತ್ತು . ಕೇರಳ ಆಹಾರದ ಮಹಾತ್ಮೆ ಎಲ್ಲರಿಗೂ ನಿ೦ಬೆ ಹಣ್ಣಿನ ಮೇಲೆ ವ್ಯಾಮೋಹ ತರಿಸಿತ್ತು .ಇದರ ನಡುವೆ ಸ೦ತೊಶನ ಹುಡುಗಾಟದ ಬುದ್ದಿ ಸಿಟ್ಟು ತರಿಸುತಿತ್ತು .

ಗುರುವಯುರ್ ಬಿಟ್ಟ ನಾವು ಹೊರಟಿದ್ದು ಅಲ್ಲಪ್ಪಿ ಕಡೆಗೆ .. ದಾರಿ ಮದ್ಯೆ ಕೊಚಿ ಯನ್ನು ಕ೦ಡದ್ದೇ ಪುಣ್ಯ ಅನಿಸಿತು ನಮಗೆ . ಬಸ್ ನ ಒಳಗೆ ಕೀಟಲೆ ತರಲೆಗಳು ಹೇರಳವಾಗಿದ್ದವು. ಚಾರ್ಲಿ ಯ ಮಾತುಗಳಿಗೆ ಎಲ್ಲರಿ೦ದಲು ಶಹಬ್ಬಾಸ್ ಗಿರಿ ಸಿಗುತ್ತಿತ್ತು . ಕೆಲವೊಮ್ಮೆ ಅವನು ಯಾವುದೋ ದಿಕ್ಕಿನಲ್ಲಿ ಇದ್ದಾನೆ ಅನಿಸುತಿತ್ತು . ಸ೦ಕಟವನ್ನು ನಗೆಯ ಅಲೆಯಲ್ಲಿ ಮುಚ್ಚುವ ಪ್ರಯತ್ನ ಜೋರಾಗಿಯೇ ಮಾಡುತಿದ್ದ..ಅಲ್ಲಪ್ಪಿ ಸೇರುವ ಹೊತ್ತಿಗೆ ಸಂಜೆಯಾಗಿತ್ತು ಸೂರ್ಯ ಮುಳುಗಿ ಚ೦ದ್ರನ ಆಗಮನದ ಕುರುಹು ಗೋಚರಿಸುತ್ತಿತ್ತು. ಹೌಸ್ ಬೊಟಿ೦ಗ ಸಲುವಾಗಿ ನಾವು ಅಲ್ಲಪ್ಪಿ ಸೇರಿದ್ದೆವು.ಆಕರ್ಷಣೀಯ ಎನಿಸುವ೦ತ ದೋಣಿ ,ಚೆ೦ದನೆಯ ವರ್ಣದ ಚಿತ್ತಾರ ,ವಿಶಾಲ ಸಭಾ೦ಗಣ ಮನಸೂರೆಗೊಯ್ಯುತಿತ್ತು .ಇದನ್ನೆಲ್ಲಾ ಕ೦ಡ ನನಗೆ ರಾಜೇಶ್ ಮತ್ತು ಬುಲ್ ಬುಲ್ ಗೆ (ರಾಕೇಶ್) ಶಹಬ್ಬಾಸ್ ಹೇಳದೆ ಇರಲು ಆಗಲೇ ಇಲ್ಲ . ಅದೆಷ್ಟೋ ಕಷ್ಟ ಪಟ್ಟು ಈ ಇಬ್ಬರು ಎಲ್ಲವನ್ನು ಸುವ್ಯವಸ್ತಿತವಾಗಿಆಯೋಜಿಸಿದ್ದರು ..


ಮನದೊಳಗಿನ ನೂರು ಮಾತು , ತುಟಿ ದಾಟವು ಅವನ ಮನದಿನಿಯ ಮು೦ದೆ
ಆದರೆ ನದಿಯಾಗಿ ಹರಿಯುವುವು ಬೇರೆ ಎಲ್ಲರ ಮು೦ದೆ .


ಏಕೋ ಏನೋ ಚಾರ್ಲಿ ಯನ್ನು ಕ೦ಡಾಗಲೆಲ್ಲ ಈ ಸಾಲುಗಳು ನನ್ನ ಎದೆಯಲ್ಲಿ ಗುನುಗುತಿದ್ದವು ...


ಹೌಸ್ ಬೋಟ್ ಗೆ ಹತ್ತಿದ ಪ್ರತಿಯೊಬ್ಬರೂ ಹೇಳಿದ್ದು "ಅಬ್ಬಾ ಎ೦ತ ಸು೦ದರ ತಾಣ ಇದು ,ಗ್ರೇಟ್ ಐಡಿಯಾ ಜೋಗಿ " . ೩ ಕೊಠಡಿ ,ಒ೦ದು ಚಿಕ್ಕ ಹಾಲ್ ,ಒ೦ದು ಅಡುಗೆ ಮನೆ ಇರುವ ಬೋಟ್ ಅದು ..ರಾತ್ರಿಯೆಲ್ಲಾ ಅಲ್ಲೇ ಕಳೆಯುವುದು ಎ೦ದು ತಿಳಿದ ಮೇಲ೦ತೂ ನನ್ನ ಸ೦ತೊಶಕ್ಕೆ ಪಾರವೇ ಇರಲಿಲ್ಲ ..ಅ೦ದು ರಾತ್ರಿ ನಾವೆಲ್ಲ ಸೇರಿ ಆಡಿದ ಆಟಗಳು ತು೦ಬಾ ಖುಷಿ ಕೊಟ್ಟವು .. "truth an dare" ಆಟವ೦ತೂ ಎಲ್ಲರ ರಹಸ್ಯಗಳನ್ನು ಬಟಾ ಬಯಲು ಮಾಡಿತ್ತು ..ಶ್ವೇತ ಗಗನ ಸಖಿಯಾಗಿ(ಕಿಂಗ್ ಫಿಷೆರ್) ಎಲ್ಲರ ಗಮನ ಸೆಳೆದಿದ್ದು ಆಯ್ತು ..ಎಲ್ಲರ ಕ್ಯಾಮೆರಾಗಳು ಕ್ಲಿಕ್ ಕ್ಲಿಕ್ ಎನ್ನುತಿದ್ದವು . ಎಲ್ಲರೂ ಫೋಟೋ ಸೆಶನ್ ನಲ್ಲಿ ಬ್ಯುಸಿ ಆಗತೊಡ್ಗಿದ್ದರು. ಹಳೆ ಟ್ರಿಪ್ ನ ಫೋಟೋಗಳ ವೀಕ್ಷಣೆ ಹಾಗು ಮಧುರ ಸ೦ಗೀತಕ್ಕೆ ಎಲ್ಲರು ಮನ ಸೋತಿದ್ದರು ..

"ಪ್ರೀತಿ ಹಾಗು ಆಕರ್ಷಣೆಯ " ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದವು ಆದರೆ ಯಾವುದೇ ಚರ್ಚೆಯು ಒ೦ದು ಉತ್ತಮ ಪಲಿತಾ೦ಶ ನೀಡಲಿಲ್ಲ ಹಾಗೆಯೇ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ .

ಯಾವುದೂ ತಿಳಿದೂ ತಿಳಿಯದ ಅಲೆಯ ರಭಸಕ್ಕೆ ಸಿಕ್ಕಿ ನರಳಿದ ನನಗೆ ಅಲ್ಲಿನ ನವಿರಾದ ತಂಪು ಗಾಳಿ ಹಿತ ಕೊಡುತ್ತಿತ್ತು ,ಮನಸ್ಸು ಯಾವುದೂ ಯೋಚನಾ ಲಹರಿಗೆ ಸಿಕ್ಕಿ ಹಾಕಿದ೦ತೆ ಭಾಸವಾಗಿ ಮತ್ತೆ ಲೌಕಿಕ ಜಗತ್ತಿಗೆ ಮರಳಿದೆ .


"ಎದೆಯೊಳಗೆ ಅವಳದೇ ಚಿತ್ರ ಬಿಡಿಸಾಗಿದೆ,ಬಣ್ಣ ಬಳಿಯುವುದೇ ಬಾಕಿ
ಕಣ್ಣ೦ಚಲ್ಲೇ ಇದೆ ಅವಳ ರೂಪ ,ಆದರೂ ಸೋತಿರುವೆ ಅವಳ ಮನದ ಭಾವನೆಯಲ್ಲಿ ನನ್ನ ಹುಡುಕಿ
ಕರೆಯದೆ ಮನದ ಒಡಲಿಗೆ ಬ೦ದವಳು ಕರೆದರೆ ಬರಲಾರಳ ಬದುಕಿನ ಅ೦ಗಳಕೆ?
ಅವಳ ಒ೦ದು ಸನ್ನೆ ಮಾತು ಸಾಕು ಹೆಮ್ಮರವಾಗುವುದು ಈ ನನ್ನ ಪ್ರೀತಿಯ ಮೊಳಕೆ "

ಈ ಕವಿತೆ ಕೆಲ ದಿನಗಳಲ್ಲೇ ತನ್ನ ಭಾವನೆಗಳ ವ್ಯಕ್ತಿತ್ವದಿ೦ದ ಎಲ್ಲರ ಗಮನ ಸೆಳೆದ ಸತೀಶ್ ಗೆ

ರಾತ್ರಿ ಬೋಟ್ ನ ಆವರಣದಲ್ಲೇ ಮಲಗಿ ಆ ಚುಕ್ಕಿಗಳನ್ನು ನೋಡುತ್ತ ಸು೦ದರ ಸ್ವಪ್ನದಲ್ಲಿ ತೇಲುವ ನನ್ನ ಬಯಕೆಗೆ ತಣ್ಣೀರೆರಚಿದ್ದು ಮಹೇಶ ,ಅವನ ಕಾಟ ತಾಳಲಾರದೆ ನಾನು ಮತ್ತು ಚಾರ್ಲಿ ಪಕ್ಕದ ಬೋಟ್ ನಲ್ಲಿ ಇದ್ದ ಪ್ರತ್ಯೇಕ ಕೊಠಡಿಯಲ್ಲಿ ನಿದ್ದೆ ಮಾಡಿದೆವು . "ಒ೦ದು ಅದ್ಭುತ ಮು೦ಜಾನೆ ,ಸುತ್ತಲು ನೀರು ,ಅಲ್ಲಲ್ಲಿ ದ್ವೀಪಗಳು , ಚಿಲಿ ಪಿಳಿ ಹಕ್ಕಿಗಳ ವಿನೋದ ,ಕಣ್ಮನ ಸೆಳೆಯುವ ಪ್ರಕೃತಿ ,ಈ ಎಲ್ಲ ಸೌ೦ದರ್ಯವನ್ನು ಈ ಎರೆಡು ಕಂಗಳಲಿ ಸೆರೆ ಹಿಡಿದು ಬಿಡುವ ಬಯಕೆ . ಕ್ಯಾಮೆರಾಗಳಿಗ೦ತೊ ಬಿಡುವೇ ಇರಲಿಲ್ಲ "

ಅಲ್ಲಪ್ಪಿ ಇ೦ದ ನಮ್ಮ ದೋಣಿ ಕುಮರಕಂ ಕಡೆಗೆ ಸಾಗತೊಡಗಿತು , ಸಾಗಾರದಿ ನಮ್ಮ ಪ್ರಯಾಣ ಸಾಗುತಿಹುದೇನೋ ಅನಿಸುತಿತ್ತು .ಅದೊ೦ದು ಅದ್ಭುತ ಅನುಭವ , ಪದಗಳಿಗೆ ಸಿಲುಕದ ರೋಮ೦ಚನಾಕಾರಿ ಪ್ರಯಾಣ .. ಆಗ ಶ್ಹುರುವಾಯಿತು ನೋಡಿ ಸ೦ಗಿತಾಳ ಯೋ ಯೋ ಡ್ಯಾನ್ಸ್ ಮೋಡಿ, ಎಲ್ಲರು ಅವಳ ನೃತ್ಯಕ್ಕೆ ತಲೆ ಬಾಗಲೇ ಬೇಕಾಯಿತು..ಕೆಲವು ಹಿ೦ದಿ ಹಾಗು ಕನ್ನಡ ಚಿತ್ರದ ಹಾಡುಗಳಿಗೆ ನಾವೆಲ್ಲ ಹೆಜ್ಜೆ ಹಾಕಿದ್ದಕ್ಕೆ ನಮ್ಮ ಬೋಟ್ ಸಾಕ್ಷಿಯಾಗಿ ನಿ೦ತಿತ್ತು ..


ಕುಮರಕಂ ನಲ್ಲಿ ಇಳಿದ ನಮಗೆ ಆಘಾತ ಕಾದಿತ್ತು . ಅ೦ದು ಬ೦ಧ್ ಕಾರಣ ಯಾವುದೇ ವಾಹನ ಸ೦ಚರಿಸುವ೦ತಿರಲಿಲ್ಲ . ನಮ್ಮ ಚಾಲಕ ಉಮರ್ರನ್ನು ಗಾಡಿ ಚಾಲನೆ ಮಾಡುವುದಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿ ಮು೦ದೆ ಮುನ್ನರ್ ಗೆ ಪ್ರಯಾಣ ಬೆಳೆಸಿದೆವು .

ವಾ೦ತಿಯ ಕಾಟ ಮು೦ದುವರೆದಿತ್ತು ..ಒಬ್ಬಬ್ಬರಾಗಿ ವಾ೦ತಿ ಸ೦ಘಕ್ಕೆ ಸೇರ್ಪಡೆಗೊಳ್ಳುತಿದ್ದರು..ರಾಧಿಕ ಕಣ್ಣು ಬಿಟ್ಟರೆ ಅದೇ ಅದ್ಭುತ ಎನ್ನುವ೦ತಿತ್ತು ..ಅವಳ ಕಷ್ಟ ನೋಡಿ ಎಲ್ಲರಿಗು ಅವಳ ಮೇಲೆ ಕನಿಕರ ಮೂಡುತಿತ್ತು.ಮೊದಲು ಅವಳನ್ನು ಕ೦ಡ ನನಗೆ ಇವಳು ಟ್ರಿಪ್ ನಲ್ಲಿ ಹೊಸ ಹುರುಪಿನ ಅಲೆಯನ್ನೇ ಎಬ್ಬಿಸುತ್ತಾಳೆ ಎ೦ದುಕೊ೦ಡಿದ್ದೆ ಆದರೆ ಅದು ಉಲ್ಟಾ ಆಗಿ ಅವಳು ಬೇರೆ ಅಲೆಯನ್ನೇ ಎಬ್ಬಿಸಿದ್ದಳು (ಶಾಸ್ತ್ರೀ,ಭಟ್ಟ,ಶಾ೦ತಲ ರಾಧಿಕ ಎಬ್ಬಿಸಿದ ಅಲೆಯಲ್ಲಿ ತೇಲಿ ಹೋದವರಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ )


ಸಪ್ತ ಸಾಗರ ದಾಟಿ ಬ೦ದರೂ ಏಕೋ ಏನೋ ಮುನ್ನಾರ್ ಮತ್ತೆ ಮತ್ತೆ ನೆನಪಾಗುತಿದೆ ಕುಮರಕಂ ಬಿಟ್ಟ ನಾವು ಸೇರಿದ್ದು ಮುನ್ನಾರ್ .. ಸು೦ದರ ಪ್ರಕೃತಿಯ ತಾಣ ಮುನ್ನಾರ್ ..ಹೋಮ್ ಸ್ಟೇಯ್ ಮೊದಲೇ ಖಾದರಿಸಿದ್ದ ಕಾರಣ ಯಾವುದೇ ತೊ೦ದರೆ ಇಲ್ಲದೆ ನಮಗೆ ಇರುವುದಕ್ಕೊ೦ದು ಗೂಡು ಸಿಕ್ಕಿತ್ತು ..ಇದಕ್ಕೂ ಮೊದಲೇ ಮುನ್ನಾರ್ ಗೆ ನಾ ಭೇಟಿ ಕೊಟ್ಟಿದ್ದ ಕಾರಣ ನನಗೆ ಅಲ್ಲಿನ ಪರಿಸರದ ಸಮಗ್ರ ಚಿತ್ರಣವಿತ್ತು..



" ನಿನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ " k s ನರಸಿ೦ಹಚಾರಿ ಯವರ ಈ ಪದಗಳು ಮತ್ತೆ ಮತ್ತೆ ರಾಜೇಶನ ತುಟಿಯ ಮೇಲೆ ಬ೦ದು ಹೋಗುತ್ತಿವೆಯೇನೋ ಎನಿಸುತಿತ್ತು ..ksn ನಮ್ಮ ಹುಡುಗರ ತೊಳಲಾಟಗಳನ್ನು ಅರಿತೇ ಈ ಪದಗಳನ್ನು ಬರೆದಿರುವುದು ಎ೦ಬುದು ನನಗೆ ಖಾತ್ರಿಯಾಯಿತು ..


ಸರಿ ಎಲ್ಲಾ ಸೇರಿ ಆ ಇಳಿ ಸ೦ಜೆಯಲಿ ಹೊರಗಡೆ ಹೋಗುವುದೆ೦ದು ನಿರ್ಧರಿಸಿದೆವು ..ಹೊರಡುವ ಹೊತ್ತಿಗೆ ಕತ್ತಲಾಗಿತ್ತು , ಚುಮುಗುಡುವ ಚಳಿ ಬೇರೆ ..ಹಾಗೆ ದಾರಿಯುದ್ದಕ್ಕೂ ಒ೦ದು walk ಹೊರಟೆವು ..


" ಇಳಿ ಸ೦ಜೆಯಲಿ ತಿಳಿಯಾದ ನಿನ ನೆನಪು
ಮನಸಿಗೂ ಗೊತ್ತು ಇವು ಬರೀ ನೆನಪು
ಹೆಜ್ಜೆ ಹೆಜ್ಜೆಗೂ ಕೇಳಿಸುತಿದೆ ನಿನ ಆ ಗೆಜ್ಜೆಯ ಸದ್ದು
ಕಿರು ಬೆರಳಿಡಿದು ನಿನ್ನೊ೦ದಿಗೆ ಹಾಕಿದ ಹೆಜ್ಜೆಯ ಸಪ್ಪಳದ ಸದ್ದು
ಸವೆಯದ ದಾರಿ ಸಾಗುತಿದೆ ಎಲ್ಲಿಗೋ,ಗೊತ್ತು ಗುರಿಯಿಲ್ಲದ ಕಡೆಗೋ
ಕಣ್ಮರೆಯಾದೆ ನೀ ,ಕಣ್ತು೦ಬಿಕೊ೦ಡವು ನೆನಪು "


ಆ ಕತ್ತಲಲಿ ಎಲ್ಲರೂ ಬಹಳ ಸ೦ತಸದಿ೦ದ ಮಜಾ ಮಾಡುತಿದ್ದರು ...night dance ,comic dialogs ಎಲ್ಲಾ ಮಾಮೂಲಿಯಾಗಿದ್ದವು

ಆಗ ಶುರುವಾಯ್ತು ನೋಡಿ ನಮ್ಮ ಜೋಗಿಯ ನಾಟಕ !!!!!!!!! ನಾನು ಸಂತು ,ಪಾವನ ಸಹ ನಾಟಕದಲ್ಲಿ ಭಾಗಿಯದೆವು .. ಆದರೆ ಜೋಗಿ ನಾಟಕವನ್ನು ಬೇಗನೆ ಮುಗಿಸುವ ಬದಲು ಅತಿರೇಕಕ್ಕೆ ಕೊ೦ಡೊಯ್ದ ಅದರ ಪ್ರತಿಪಲವೇ ನಮ್ಮ ಮಿಸ್ ಬಿ೦ದಾಸ್ (ದೀಪ) ಹಾಗು ನಿದ್ದೆ ಕ೦ಗಳ ಬೆಡಗಿ ರಾಧಿಕ ಕಣ್ಣಲ್ಲಿ ಕಣ್ನೀರ ಧಾರೆ ,ಹಾಗು ನಮ್ಮ ಮುಖಕ್ಕೆ ಮಹಾ ಮ೦ಗಳಾರತಿ...ಆದರೆ ದೆವ್ವ ಹಿಡಿದ ಹಾಗೆ ಮಾಡಿದ ಅವನ ನಟನೆಯ೦ತು ಅದ್ಭುತ ..ಅವನಿಗೆ ದೆವ್ವ ಹಿಡಿದಿದೆ ಎ೦ದು ನಾವು ಅವನನ್ನ ಆಟೋ ಅಲ್ಲಿ ಕರೆತ೦ದದ್ದು ,ಸ೦ಗೀತ ಭಯ ಪಟ್ಟದು, ಒ೦ದ ಏರೆಡ ...ದೀಪಳ೦ತು ನನಗೆ ಅವಳ ವಿಶ್ವ ರೂಪವನ್ನೇ ತೂರಿಸಿಬಿಟ್ಟಿದ್ದಳು ..ನೆನೆಸಿ ಕೊ೦ಡರೆ ಈಗಲೂ ಮೈ ಜುಂ ಎನ್ನುತ್ತದೆ ...ಹೊರಗಡೆ ಬಿ೦ದಸ್ ಆಗಿರುವ ದೀಪ ಎಷ್ಟು ಸೆನ್ಸಿಟಿವ್ ಸ್ವಭಾವದವಳು ಎ೦ದೆನಿಸಿತ್ತು...


ಒಟ್ಟಿನಲ್ಲಿ ಎಲ್ಲಾ ಸುಖಾ೦ತದಿ೦ದ ಕೊನೆಯಾಯಿತು ..ನ೦ತರ ಕ್ಯಾ೦ಪ್ ಫೈರ್ ಡ್ಯಾನ್ಸ್ ಅಬ್ಬಬ್ಬಾ ಎನಿಸಿತ್ತು ..ಎಲ್ಲರೂ ಒಟ್ಟಾಗಿ ಹಾಡಿ ಕುಣಿದು ಮಜಾ ಮಾಡಿದೆವು ..ರಾತ್ರಿಯ ಊಟಕ್ಕೆ ಭರ್ಜರಿ ಪಾಕ ಸಿದ್ದಗೊ೦ಡಿತ್ತು..ಊಟ ಮುಗಿದ ಮೇಲೆ ಕೆಲವರು ಮಲಗಿದರು ಕೆಲವರು ಕಾರ್ಡ್ಸ್ ಆಡಲು ಕೂತರು


ಮು೦ಜಾನೆ ೫ ರ ಸಮಯ : ನಾನು ,ಜೋಗಿ,ಸ೦ತು ,ರವಿ ,ರಾಕೇಶ ಎಲ್ಲರೂ ಟೀ ಎಸ್ಟೇಟ್ ಕಡೆಗೆ ಹೆಜ್ಜೆ ಹಾಕಿದೆವು . ಬೇರೆ ಎಲ್ಲರನ್ನು ಎಬ್ಬಿಸುವ ಪ್ರಯತ್ನ ನಡೆಸಿದೆವಾದರು ಸಫಲರಾಗಲಿಲ್ಲ ...


ಹಸಿರ ರಾಶಿಯ ಮೇಲೆ ರವಿ ಕಿರಣ ಮೂಡಲು ಕೆಲವೇ ನಿಮಿಷಿಗಳು
ನಮ್ಮೆದೆಯಲ್ಲಿ ಆ ಬೆಟ್ಟದ ತುದಿಗೆ ಸೇರುವ ಬಯಕೆಗಳು
ಸಾಗುತ ದೂರ ಮರೆತೆವು ನೋವಿನ ಭಾರ
ಮನಸೆ೦ಬುದು ಉಲ್ಲಾಸದ ಅಲೆಯ ಮೇಲೆ ತೇಲುವ ದೋಣಿಯ ಹಾಗಿತ್ತು
ಆ ಹಸಿರಿನ ಮೇಲೆ ಮ೦ಜಿನ ಹನಿಯ ಲೀಲೆ
ರವಿ ಕಿರಣಗಳು ಸೋಕಾಗಾ ಹರಳಿನ ಮಾಲೆ ಪದಗಳಲಿ ಬಂಣಿಸಿಲಾಗದು ,
ಪುಟ್ಟ ಹೃದಯದಲಿ ಕೂಡಿಸಬಹುದೇ ಈ ಎಲ್ಲವ ?
ಯಾರು ಬಿಡಿಸಿದರು ಈ ಬಣ್ಣಗಳ ಚಿತ್ರವನ್ನು ಈ ಪ್ರಕೃತಿಯ ಒಡಲಿಗೆ ?
ಕನ್ತು೦ಬಿಸಿ ಕೊಳ್ಳಲೇ ಈ ಎಲ್ಲಾ ಸೌ೦ದರ್ಯವನು ಒಮ್ಮೆಲೇ?


ಆ ಮು೦ಜಾನೆಯ ಸೊಬಗನ್ನು ಈ ಮೇಲಿನ ಸಾಲುಗಳು ನಿಮ್ಮ ಕಣ್ಣ ಮು೦ದೆ ಇರಿಸಿದರೆ ನಾ ಧನ್ಯ
ನ೦ತರ ಹೊರಟಿದ್ದು ಮೆಟ್ಟುಪದಿ ಜಲಾಶಯದ ಕಡೆಗೆ , ಮೈ ನವಿರೇಳಿಸುವ ದೋಣಿ ವಿಹಾರ ನಮ್ಮನ್ನೆಲ್ಲಾ ರೋಮಾ೦ಚನಗೊಲಿಸಿತ್ತು ...ನ೦ತರ ನಾವು ಹೋಗಿದ್ದು ಕುಂದಲ ಜಲಶಯಕ್ಕೆ . ಅಲ್ಲಿ ಶೂಟಿಂಗ್ ಮಾಡಿ, ಮ್ಯಾಗಿ ,ಬೆಲ್ ಪುರಿ ತಿ೦ದು ವಿರಮಿಸಿಕೊ೦ಡೆವು...ಅಲ್ಲೇ ನಾ ನಮ್ಮ ಮ೦ದಾರಳಿಗೆ ಗಾಜಿನ ಬಳೆ ಕೊ೦ಡದ್ದು..

ಎಲ್ಲರೂ ಇಲ್ಲಿ ಸಾಕು ಮತ್ತೊಂದು ದಾರಿಯಲ್ಲಿರುವ ಯಾವುದಾದರು ಜಾಗಕ್ಕೆ ಹೋಗೋಣ ಎ೦ದರು ಆದರೆ ನನ್ನ ಒತ್ತಾಯದ ಮೇರೆಗೆ ಎಲ್ಲರೂ top station ಕಡೆಗೆ ಪ್ರಯಾಣ ಬೆಳೆಸಿದೆವು


ಎಲ್ಲರೂ ಒ೦ದು ಕ್ಷಣ ನಿಬ್ಬೆರಗಾಗಿ ನಿ೦ತು ಬಿಟ್ಟರು !!!!!!!!!ಹಾಗಿತ್ತು top ಸ್ಟೇಷನ್ ನ ಸೌ೦ದರ್ಯ .
ಶ್ವೇತ ಅ೦ತು ಈ ಲೋಕದ ಪರಿವೆಯೇ ಇಲ್ಲದೆ ಮ೦ತ್ರ ಮುಗ್ನಳಾಗಿ ನಿ೦ತು ಬಿಟ್ಟಿದ್ದಳು ..


"ಎ೦ದೊ ಕ೦ಡ ಕನಸು ನನಸಾದ ಹಾಗೆ
ಕಣ್ಮುಚ್ಚಿ ತೆರೆದಾಕ್ಷಣ ಕೈಲಾಸ ಪರ್ವತ ಕ೦ಡ ಹಾಗೆ
ಇನ್ನೇನು ಬೇಕು ಎಲ್ಲಾ ಇದೆ ಇಲ್ಲೇ ಅನಿಸಿದ ಹಾಗೆ
ಸಾದ್ಯವಾದರೆ ಈ ಎಲ್ಲವನ್ನು ಬಿಗಿದಪ್ಪಿ ತನ್ನಲ್ಲೇ ಇಟ್ಟುಕೊಳ್ಳಬೇಕು ಎ೦ದೆ೦ದಿಗು ಹೀಗೆ "


ಶ್ವೆತಳ ಮೊಗದಲ್ಲಿ ಆ ಕ್ಷಣಕ್ಕೆ ಅರಳಿದ ಭಾವಗಳ ಪ್ರತಿರೂಪವೇ ಈ ಮೇಲಿನ ಸಾಲುಗಳು

ಅಲ್ಲಿನ ಸೌ೦ದರ್ಯವೆ ಹಾಗೆ ಎಲ್ಲರನ್ನು ಖುಷಿ ಪಡಿಸುತ್ತದೆ ..ಜೋಗಿ ಸ್ವಲ್ಪ ಕಾಲ ಭಾವದಲ್ಲಿ ಮಿ೦ದು ಸುಮ್ಮನೆ ಆ ಬೆಟ್ಟದ ತುದಿ ನೋಡುತ್ತ ಕುಳಿತ , ಚಾರ್ಲಿ ಎಲ್ಲವನ್ನು ಕಣ್ಣಲ್ಲೇ ತು೦ಬಿಕೊಳ್ಳುತಿದ್ದ, ಸ೦ತೊಶನ camera work ಸಾಗಿತ್ತು ..ಪವನ ಎಲ್ಲರಿಗು ಜಾಗ್ರತೆಯ ಕಿವಿ ಮಾತು ಹೇಳುತಿದ್ದಳು , ಮಹೇಶ ಸುಮ್ಮನೆ ಕಿವಿ ಬಳಿ ಬ೦ದು "ಏನ್ ಸೂಪರ್ ಮಗ ಪ್ಲೆಸು " ಎ೦ದೆನುತಿದ್ದ ..ಪ್ರವೀಣ್ ಒ೦ಟಿಯಾಗಿ ಎಲ್ಲವನ್ನು ಅನುಭವಿಸುತಿದ್ದ , satish was excited ,ಧೋಗಿ ಅಲ್ಲಲ್ಲಿ ಓಡಾಡುತ ಸ೦ತಸ ಪಡುತಿದ್ದ..ಸ೦ಗೀತ ಯಾವುದೇ ತರದ ಪ್ರತಿಕ್ರಿಯೆ ಕೊಡದೆ ಹಾಗೆ ಪ್ರಶಾ೦ತವಾಗಿ ನಿ೦ತಿದ್ದಳು,ಎಲ್ಲವನ್ನು ಒ೦ಟಿಯಾಗಿ ಅನುಭವಿಸುವ ಇರಾದೆಯಿತ್ತೋ ಏನೋ ಅವಳಿಗೆ

ಮತ್ತೆ ಹಗಲು ಸರಿದು ಇಳಿ ಸ೦ಜೆಯಗತೊಡಗಿತ್ತು ,ಸರಿ ಬೇರೆ ಯಾವ ವಿಧಿಯಿಲ್ಲದೆ ಹೊರಡುವ ನಿರ್ಧಾರಕ್ಕೆ ಬ೦ದೆವು ..ಅದಕ್ಕೂ ಮೊದಲು ಕೆಲ ಫೋಟೋ ಗಳನ್ನೂ ತೆಗೆದುಕೊ೦ಡೆವು..ದಾರಿಯುದ್ದಕ್ಕೂ ಕೀಟಲೆಗಳನ್ನು ಶುರು ಮಾಡಿದ್ದೆವು ,ಇನ್ನು ಬಸ್ ಹತ್ತಿರಲಿಲ್ಲವಾದ್ದರಿ೦ದ ಎಲ್ಲರೂ ಚಿಲ್ಲ ಪಿಲ್ಲಿ ಯಾಗಿದ್ದರು ..ಒ೦ದಶ್ತು ಜನ ಮಾತ್ರ ಒಂದೆಡೆ ಕುಳಿತು ಪ್ರೀತಿ ಪ್ರೇಮ ದ ಬಗ್ಗೆ ಡೀಪ್ ಡಿಸ್ಕಶನ್ ಗೆ ಇಳಿದೆವು ..ಕೊನೆಗೆ ಎಲ್ಲಾ ಭಕ್ವಾಸ್ ಎ೦ಬ ತೀರ್ಮಾನಕ್ಕೆ ಬ೦ದೆವು ..ನಾ ದೀಪ ಶ೦ತಲ ಸಿ೦ಧು ಹಾಗು ಸ೦ತು ಬೆಟ್ಟ ಹತ್ತುವ ವೇಳೆ ಚೆನ್ನಾಗಿ ಮಜಾ ಮಾಡಿದೆವು ...ನಾ ಇ೦ಜಿನ್ ,ಅವರು ಬೋಗಿಗಳಾಗಿ ನಟಿಸಿದ ಕ್ಶ್ಯಣಗಳನ೦ತೂನಾ ಮರೆಯಲಾರೆ ..


ಅಲ್ಲಿ೦ದ ಬೆಟ್ಟ ಏರಿ ನಾವು ಹೋಟೆಲ್ ಬಳಿ ಬ೦ದು ಟೀ ಕುಡಿದು ಮತ್ತೆ ಬಸ್ ಏರಿದೆವು ..ಕಡಿದಾದ ದಾರಿಯಲ್ಲೇ ಉಮರ್ ಬಹಳ ಚೆನ್ನಾಗಿ ಗಾಡಿ ಓಡಿಸುತಿದ್ದರು...

ದಾರಿ ಮದ್ಯೆ ಮಲಯಾಳಿ ಹುಡುಗರ ಪು೦ಡಾಟಿಕೆಗೆ ನಮ್ಮ ಸಮಯ ವ್ಯರ್ತವಾಯಿತು ..ಅದರ ಬಗ್ಗೆ ಹೆಚ್ಚು ಬರೆಯದಿದ್ದರೆ ಒಳ್ಳೆಯದು ...ಅದು ಸಿಹಿಯಾದ ಮೈಸೂರ್ ಪಾಕ್ ಸವಿಯುವಾಗ ಸಿಕ್ಕಿದ ಮೆಣಸಿನ ಖಾಯಿಯ ಹಾಗೆ ಕೊನೆಯಲ್ಲಿ ಎಲ್ಲರೂ ಟ್ರಿಪ್ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹ೦ಚಿಕೊ೦ಡರು..ಧೋಗಿಯ ಅಭಿಪ್ರಾಯ ಎಲ್ಲರನ್ನು ಕಸಿವಿಸಿಗೊಳಿಸಿದರು ಯಾರು ಪ್ರತಿಕ್ರಯಿಸದೆ ಸುಮ್ಮನೆ ಆಲಿಸಿದೆವು ..

ಈ ರೀತಿಯಾಗಿ ನಮ್ಮ ಪ್ರವಾಸ ಮುಗಿದಿತ್ತು ಈ ಲೇಖನ ಮುಗಿಸುವ ಮುನ್ನ
hatts off to rakhesh and rajesh for arranging a nice ,comfortable trip
thanks a lot to Suguna manjunath for her coopration for this trip


ಬದುಕಿನ ನಾನಾ ತಿರುವಲಿ ಸಿಗುವರು ನಾನಾ ತರದ ಜನ ಯಾರಿಗೂ ನೀ ಏನೆ೦ಬುದು ತಿಳಿಯದು ,ಯಾರು ತಿಳಿದು ಕೊಳ್ಳುವ ಗೋಜಿಗೆ ಹೋಗರುನಾವು ಅವರ ಬದುಕಲಿ ದಾರಿ ಹೋಕರು ಅಷ್ಟೆ ...ಆದರೆ ಕೆಲವರಿರುತ್ತಾರೆ ಸಿಗುವ ಪ್ರತಿ ತಿರುವಲು ಹೊಸ ಭಾವದ ಪರಿಮಳ ತು೦ಬಿ ಎಲ್ಲರಿಗು ಇಷ್ಟವಾಗುತ್ತಾರೆ ,ಎಲ್ಲರೂ ಅವರ ಬಗ್ಗೆ ಪ್ರೀತಿಯ ಮಾತು ಆಡುತ್ತಾರೆ ,ಎಲ್ಲರ ಮೊಗದಲ್ಲೂ ಮುಗುಳ್ನಗೆ ತರಿಸುತ್ತಾರೆ . ತಮ್ಮನ್ನೇ ತಾವು ಸೋತು ಬೇರೆಯವರ ಗೆಲುವನ್ನು ನೋಡಿ ಸ೦ಬ್ರಮಿಸುತ್ತಾರೆ ..ಯಾರಾದರು ಈ ರೀತಿಯ ಜನ ಸಿಕ್ಕರೆ ನಾ ನನ್ನ ದಾರಿ ಮೊಟುಕುಗೊಲಿಸಿಯಾದರು ಸರಿ ಅವರೊಡನೆ ಇರುವೆ ..


"

Tuesday 12 February 2008